my dream sea

ಕನಸಿನ ಲೋಕ
ಸಮುದ್ರದಲ್ಲಿ ಜೀವನ ನಡೆಸುವುದರ ಬಗ್ಗೆ ನನಗೆ ಆಗಾಗ ಕಲ್ಪನೆ ಬರುತ್ತಿರುತ್ತದೆ. ಇದನ್ನು ಆಳವಾಗಿ ಯೋಚನೆ ಮಾಡಿದಾಗ ಸ್ವಲ್ಪ ಮುಖ್ಯವಾದ ಅನುಭವದ ಜೊತೆ ಸಂತೋಷವೂ ಆಗುತ್ತದೆ.
ಸಮುದ್ರದ ಜೀವನ ಅಂದರೆ ಹಡಿಗಿನಲ್ಲಿ ಇರುವುದು ಮಾತ್ರವಲ್ಲ. ಇದರ ಒಂದು ಲೋಕವೇ ಬೇರೆ ಇದೆ. ಇಲ್ಲಿ ಜೀವನ ನಡೆಸುವವರಿಗೆ ಬೇರೆ ರೀತಿಯ ಮುನ್ನೆಚ್ಚರಿಕೆಗಳು ಇರುತ್ತವೆ.
ಇಂದಿನ ವಿದ್ಯಮಾನಗಳಲ್ಲಿ ಕಾಣುವಂತ ಭೂಮಿ ವಿವಾದದ ಕುರಿತು ಸೂಮಾರು ಬಗೆಬಗೆಯ ಗದ್ದಲಗಳು ನಮ್ಮೆದುರಿಗೆ ನಡೆಯುತ್ತಿರುತವೆ. ಇದರಿಂದ ಬೇಸತ್ತು ಸಮುದ್ರದಲ್ಲಿ  ಆಸ್ತಿ ಮಾಡಿದರೆ ಹೇಗಿರುತ್ತದೆ ? ಭೂಮಿಯ ಮೇಲೆ ಸಮುದ್ರದ ಪ್ರದೇಶವೇ ಹೆಚ್ಚು ಇದೆ. ಅದರೆ ನಾವು ಸಮುದ್ರದಲ್ಲಿ ಆಸ್ತಿ ಮಾಡುವ ಬಗ್ಗೆ ಯೋಚನೆ ಮಾಡಬೇಕಾಗಿದೆ.


 ಈ ನಮ್ಮ ಜಾಗತಿಕ ಜಗತ್ತು ಮುಂದುವರಿಯುತ್ತಿರುವುದರಿಂದ ನಾವು ಏನು ಮಾಡಬೇಕು ? ಹೇಗೆ ಬದುಕ ಬೇಕೆಂಬ ಒಂದು ದೊಡ್ಡ ಆತಂಕವಿದೆ.
ಇಂತಹ ಒಂದು ಆತಂಕವನ್ನು ಇಟ್ಟುಕೊಂಡು ನಾನು ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾಗ ನಾನು ಸಮುದ್ರದ ತೀರಕ್ಕೆ ಹೋಗಿದ್ದೆ. ಅಲ್ಲಿ ಇರುವಂಥಹ ಸಮುದ್ರದ ತಿರುವನ್ನು ಕಂಡು ನನ್ನ ಮನಸಿಗೆ ತುಂಬಾ ಆನಂದವಾಯಿತು. ಸಮುದ್ರ ಲೋಕವನ್ನು ಕಂಡು ನನ್ನ ಕಲ್ಪನೆಯ ಶಕ್ತಿ ಮತ್ತಷ್ಟೂ ಹೆಚ್ಚಾಯಿತು. ನಂಗೆ ಒಂದು ರೀತಿಯಲ್ಲಿ ಸಂತೋಷವಾಗುತ್ತಿತು. ನಾನು ಟಿವಿ ಹಾಗೂ ಸಿನಿಮಾದಲ್ಲಿ ಕಂಡಿರುವಂತಹ ದೃಶ್ಯವನ್ನು ಪ್ರತ್ಯಕ್ಷವಾಗಿ ನನ್ನೆದುರಿಗೆ ಇರುವುದು ಕನಸಿನಂತೆ ಅನಿಸುತ್ತಿತು. ಆದರೆ ಇದೇ ವಾಸ್ತವಾವಿತ್ತು. ನನ್ನ ಕನಸಿನ ಸಮುದ್ರದಲ್ಲಿ ಪ್ರಶಾಂತವಾದ ಅಲೆಗಳನ್ನು ಕಂಡು ನಾನು ಮತೊಮ್ಮೆ ನನ್ನ ಕನಸಿನ ಲೋಕಕ್ಕೆ ಮರಳಿ ಹೋದೆ. ಸಮುದ್ರದ ಲೋಕವನ್ನು ಕಂಡು ನಾನು ಕಲ್ಪನೆಯ ನೆಲೆಯಲ್ಲಿ  ಕೊಚ್ಚಿಹೋಗಿದ್ದೆ. ಈ ನನ್ನ ಕನಿಸಿನ ಲೋಕ ನನ್ನ ಕನಸುಗಳಿಗೆ ಹೊಸ ತಿರುವು ನೀಡಿತ್ತು.

 ಈ ಕಾರಣದಿಂದ ನಾನು ಈ ಒಂದು ಕನಸಿನ ಲೋಕ ಎಂಬ ಬರಹವನ್ನು ಬರೆಯಲು ಸಾಧ್ಯವಾಯಿತು.
ನಮ್ಮಲ್ಲಿ ದಿನನಿತ್ಯ ಒಂದಲ್ಲ ಒಂದು ಭೂ ವಿವಾದಗಳು ನಮ್ಮ ಗಮನಕ್ಕೆ ಬರುತಿರುತ್ತವೆ, ಇದನ್ನು ಹೊರತುಪಡಿಸಿ ಯೋಚಿಸಿದರೆ. ನಾವು ಕಿತ್ತಾಡುವುದು ಮಾತ್ರ ಹಿಡಿ ಭೂಮಿ ಆಸ್ತಿಗಳಿಗಾಗಿ ಮಾತ್ರ ಎಂಬುದು ನನಗೆ ಮಂಗಳೂರಿನ ಸಮುದ್ರದ ತೀರದಲ್ಲಿ ಅರಿವು ಆಗಿತ್ತು. ವಿಶ್ವದಲ್ಲಿ ಭೂಮಿಗಿಂತ ಹೆಚ್ಚು ಸಮುದ್ರ ಪ್ರದೇಶವೇ ಇರುವುದು ನಮಗೆ ಮರೆತು ಹೋಗಿದೆ ಅಂತ ಅನಿಸುತ್ತದೆ. ಅದಕ್ಕೆ ಸಿಗಲಾರದನ್ನು ಪಡೆಯಲು ಮಾಡಬಾರದ ಕೆಲಸಗಳನ್ನು ಮಾಡಲು ಮುಂದಾಗುತಿದ್ದೇವೆ. ಹೆತ್ತವರನ್ನು ಸಹ ಬಿಡುವುದ್ದಿಲ್ಲ ಮೃಗಗಳಂತೆ ನಡೆದುಕೊಳ್ಳುತ್ತಿದ್ದೇವೆ. ಕೇವಲ ಆಸ್ತಿ. ಸಂಪತ್ತುಗಳ ಸಲುವಾಗಿ ಮಾತ್ರ ಇದೆಲ್ಲ ನಡೆಯುತ್ತೆ ಎಂಬುದ ನನಗೆ ತಿಳಿಯಿತು. ಆದರೆ  ನಾವು ಸಮುದ್ರದಲ್ಲಿಯೂ ಜೀವನ ಮಾಡಬಹುದಲ್ಲ..! ಮತ್ತು ಸಮುದ್ರದಲ್ಲಿ ಆಸ್ತಿಯನ್ನು ಮಾಡಬಹುದಲ್ಲ ಎಂಬ ಕಲ್ಪನೆ ನಮ್ಮಲ್ಲಿ ಬರಲಿಕ್ಕಿಲ್ಲ.
ಆದರೆ ಇಂದಿನ ಜಾಗತಿಕ ವಿದ್ಯಾಮಾನಗಳಲ್ಲಿ ನಮ್ಮ ವಿಜ್ಞಾನ ಜಗತ್ತು ಚಂದ್ರನಲ್ಲಿ ಆಸ್ತಿಮಾಡುವುದರ ಬಗ್ಗೆ ಪತ್ತೆ ಹಚ್ಚಿದೆ.ನೋಡಿ ನಮ್ಮ ವಿಜ್ಞಾನ ಜಗತ್ತಿಗೆ ಎಷ್ಟೊಂದು ದೂರ ದೃಷ್ಠಿ ಇದೆ. ನಮ್ಮ ವಿಜ್ಞಾನ ಜಗತ್ತಿಗೆ ಚಂದ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಅಂದರೆ ನಮ್ಮ ವಿಜ್ಞಾನ ಜಗತ್ತು ಎಷ್ಟೊಂದು ಮುಂದುವರೆದಿದೆ ಎಂಬುದನ್ನು ನಾವು ಅಂದಾಜು ಮಾಡಬಹುದು. ಈ ನಮ್ಮ ವಿಜ್ಞಾನ ಜಗತ್ತಿನ ಸಹಯಾದಿಂದ ನಾವು ಸಮುದ್ರ ಹಾಗೂ ಸಾಗರದಲ್ಲಿ ಆಸ್ತಿ ಮಾಡಬಹುದು ಎನ್ನುವ ವಿಷಯಗಳು ನಮಗೆ ವಿಜ್ಞಾನ ಜಗತ್ತಿನಿಂದ ಮಾತ್ರ ತಿಳಿಯುತ್ತದೆ. ನಾವು ಸಮುದ್ರದಲ್ಲಿ ಆಸ್ತಿಯನ್ನು ಮಾಡಬಹುದು ಎಂಬುದರ ಬಗ್ಗೆ ಯೋಚಿಸಬಹುದು. ಆದರೆ ನಮ್ಮ ವಿಜ್ಞಾನ ಜಗತ್ತು ಸಮುದ್ರದಲ್ಲಿ ಆಸ್ತಿಯನ್ನು ಮಾಡಿದೆ. ಅದು ಹೇಗೆ ಎಂದು ಆಶ್ಚರ್ಯ ಪಡಬೇಕಾದ ವಿಷಯವಾದರೂ ಇದು ಸತ್ಯ. ನಾವು ಕಾಣುವಂತಹ ಸಮುದ್ರದಲ್ಲಿ ಮೀನಿನಂತೆ ತೇಲಾಡುವ ದೋಣಿಗಳು ದೊಡ್ಡ ದೊಡ್ಡ ಹಡಗುಗಳು ಹಾಗೂ ಬ್ರಿಡ್ಜ್ ಗಳನ್ನು ನೋಡಬಹುದು. ಈ ರೀತಿಯ ಪ್ರಯೋಗಗಳನ್ನು ಮಾಡಿ ನಾವು ಸಮುದ್ರದಲ್ಲಿ ಆಸ್ತಿ ಮಾಡಬಹುದು ಎಂಬುದು ತಿಳಿಸುತ್ತದೆ.

ನಾಸಾದ ಇತ್ತೀಚಿನ ಪ್ರಯೋಗವನ್ನು ಗಮನಿಸಿದರೆ. ಅದರ ಕಣ್ಣು ಭೂಪಟದ ಮೇಲೆ ಇಲ್ಲ, ಚಂದ್ರನಲ್ಲಿದೆ. ಭೂಮಿಯ ಮೇಲೆ ಬದುಕುವವರು ನಾವು ಚಂದ್ರನ ಮೇಲೆ ಹೊಗಿ ಜೀವನ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗತ್ತಾ. ಇದು ನಮ್ಮನ್ನು ಕಾಡುವಂತ ದೊಡ್ಡ ಪ್ರಶ್ನೆ.
ಭೂಮಿಯ ಮೇಲೆ ಬದುಕುವವರು ನಾವು ಭೂಮಿ ಮೇಲೆ ಆಸ್ತಿ ಮಾಡಬೇಂಬ ಆಸೆಯನ್ನು ಹೊಂದಿದ್ದೇವೆ. ಸಮುದ್ರದಲ್ಲಿಯೂ ಆಸ್ತಿ ಮನೆ ನಿರ್ಮಾಣ ಮಾಡುಬಹುದು ಎಂಬುದರ ಬಗ್ಗೆ ಯೋಚನೆಯೂ ಮಾಡಿಲ್ಲ. ಸಮುದ್ರದಲ್ಲಿಯೂ ಜೀವನ ನಡೆಸಬಹುದು ಎಂಬುದು ಆಶ್ಚರ್ಯದ ವಿಷಯವೇ ನಮಗೆ ಬಹುದೊಡ್ಡದು.
ಈ ಮೇಲಿನ ವಿಷಯದ ಬಗ್ಗೆ ನಾನು ಒಂದು ಬಾರಿ ಕಲ್ಪನೆ ಮಾಡಿಕೊಂಡು ಯೋಚಿಸಿದೆ. ಇದು ಹೇಗೆ ಸಾದ್ಯ ವೆಂದು ಪ್ರಶ್ನೆಯನ್ನು ಹಾಕಿಕೊಂಡೆ. ಆಗ ನಾನು ಚಿಂತನಾ ಜಗತ್ತಿಗೆ ಜಾರಿದ ಹಾಗೆ ಅನಿಸಿತ್ತು. ಇದು ಸಾಧ್ಯವಾಗುತ್ತದೆ. ಎಂದು ಅನಿಸಿತ್ತು.  ಆ ಮೂಲಕ ಒಂದು ಮಾರ್ಗವನ್ನು ಆಲೋಚಿಸಿದೆ.

ನಾವು ಸಮಾನ್ಯವಾಗಿ ಭೂಮಿಯ ಮೇಲೆ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ನನಗೆ ಮನೆ ಇದ್ದರು ಇನ್ನೂ ಹೆಚ್ಚು ಆಸ್ತಿ ಮಾಡಬೇಕು ಎಂಬುದು ಆಸೆ ಇರುತ್ತದೆ. ಆಸ್ತಿ ಮಾಡಬೇಕಾದರೆ ಸಮುದ್ರದಲ್ಲಿ ಮಾಡಬಹುದಲ್ಲ ? ಸಮುದ್ರದಲ್ಲಿ ಇಂತಿಷ್ಟು ಆಸ್ತಿ ಇತ್ತು ಅಂದರೆ ಅಲ್ಲಿ ವೈಜ್ಞಾನಿಕವಾಗಿ ಒಂದು ಮನೆಯನ್ನು ನಿರ್ಮಿಸಬಹುದಲ್ಲ.. ಮನೆ ನಿರ್ಮಾಣ ಮಾಡಿದ್ದಾಗ ಇನ್ನುಳಿದಿರುವುದು ಜೀವನ ನಿರ್ವಹಣೆ ಮಾತ್ರ ಅದನ್ನು ಶುರು ಮಾಡಬೇಕಾದರೆ.ನಾವು ಭೂಮಿಯ ಮೇಲೆ ಒಂದು ಮನೆ ನಿರ್ಮಾಣ ಮಾಡಿ ಅದಾದ ನಂತರ ಮಾಡುವಂತಹ ಕೆಲಸ ಕಾರ್ಯ ಯೋಜನೆಗಳೆನು ?  ಪೂರ್ವ ಸಿದ್ಧತೆಗಳೇನು ?  ಎಂಬುದು ನಮಗೆ ಗೊತ್ತಿರುತ್ತದೆ. ಕೆಲವೊಂದು ತಿಳಿದುಕೊಂಡು ಮಾಡಿಕೊಳ್ಳುತ್ತೇವೆ ಅಲ್ಲವೆ ?  ಅದೇ ರೀತಿಯಲ್ಲಿ ಸಮುದ್ರದಲ್ಲಿಯೂ ಜೀವನ ನಿರ್ವಹಣೆ ಮಾಡಲು ಬೇಕಾಗುವಂತಹ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಜೀವನ ನಡೆಸಬಹುದಲ್ಲವೇ ? ಈ ಮೂಲಕ ಪ್ರತಿಯೊಂದು ವಿಷಯದ ಬಗ್ಗೆ ಪೂರ್ವ ಸಿದ್ಧತೆ ಎಂಬುದು ಇರಲೇಬೇಕಾಗುತ್ತದೆ. ಎಂಬುದು ನನ್ನ ದೃಷ್ಠಿಕೋನವಾಗಿದೆ.

Comments