my diary


ನಾನು ಮತ್ತು ನನ್ನ ಆಸಕ್ತಿ
ನಾನು ಬದುಕು ಕಮ್ಯೂನಿಟಿ ಕಾಲೇಜುನಲ್ಲಿ ಪತ್ರಿಕೋದ್ಯಮ ತರಬೇತಿ ಪಡೆಯಲು ಗುಲ್ಬಗರ್ಾದಿಂದ ಬೆಂಗಳೂರುಗೆ ಬರಬೇಕಾಗಿತ್ತು. ಇದೇ ಸಂದರ್ಭದಲ್ಲಿ ನಮ್ಮ ಹೊಲದಲ್ಲಿ ಬೀತ್ತನೆ ಪ್ರಾರಂಭವಾಗಿದವು. ನಾನು ಖೂಷೀ ಖೂಷೀಯಲ್ಲಿ ಇದೆ. ಬೀತ್ತನೆ ಮುಗಿಸಿ ಕಾಲೇಜಿಗೆ ಸೇರಬೇಂದು ಖೂಷೀಯಿಂದ ಬೀತ್ತನೆಯನ್ನು ಮಾಡಿದೆ. ಬೀತ್ತನೆಯನ್ನು ಮುಗಿಸಿದ ನಂತರ ನನ್ನ ತಂದೆ ಅವರ ಜೊತೆಯಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಬರಲು ಸಿಧವಾಗಿದೆ.

ಆದರೆ ನನ್ನ ಅತ್ಮಿಯ ಸ್ನೇಹಿತನಾದ ಮುಜಾಹೀದ್ ಪಟೇಲ್, ನೀಜಾಮೋದ್ದಿನ್ ಹಾಗೂ ಆರಿಫ್ ಅವರು ಶಾಹಪೂರದಲ್ಲಿ ಅವರ ಮನೆಯಾಗಿತ್ತು. ಅವರು ನನ್ನನ್ನು ಬೆಂಗಳೂರಿಗೆ ತಲುಪ್ಪಿಸಲು ನನ್ನ ಜೊತೆಗೆ ಬರಲು ಸಿಧವಾದರು. ಆದರೆ ನಮ್ಮಿಬ್ಬರಿಗೆ ಒಂದು ವೇಳೆಗೆ ಟ್ರೈನ್ ಸಂರ್ಪಕ ಸಿಗಲಿಲ್ಲ. ಇದೆ ಕಾರಣಕ್ಕಾಗಿ ಅವರು ಮೂವರು ಸೇರಿ ಯಾದಗಿರ ಜಿಲ್ಲೆಯಿಂದ ಟ್ರೈನ್ ಹತ್ತಿದರು. ನಾನು ಮತ್ತು ನನ್ನ ತಂದೆ ಅವರು ಗುಲ್ಬಗರ್ಾ ರೈಲ್ವೆ ನಿಲ್ದಾಣದಿಂದ ಮೊದಲೆನೆಯ ಬಾರಿ ತಂದೆಯ ಜೊತೆಯಲ್ಲಿ ಬೆಂಗಳೂರು ಮಹಾನಗರದ ಮೇಜಸ್ಟಿಕ್ಗೆ ಬಂದಿಳಿದ್ದೇವು ನಂತರ ಅಲ್ಲಿಂದ ಶೇಷಾದ್ರಿಪೂರಂಗೆ ಆಟೋವನ್ನು ತೆಗೆದುಕೊಂಡು ಬದುಕು ಕಮ್ಯೂನಿಟಿ ಕಾಲೇಜ್ಗೆ ತಲುಪ್ಪಿದೆ.

ನಂತರ ಅಲಿ ತರಬೇತಿಯ ಬಗ್ಗೆ ಮುರಳಿ ಮೋಹನ್ ಕಾಟ್ಟಿ ಸರ್ಗೆ ವಿಚಾರಿಸಿ, ಕಾಲೇಜಿನಲ್ಲಿ ದಾಖಲೆಯನ್ನು ಪಡೆದ್ದಿದೆ. ಆದರೆ ತರಗತಿ ಪ್ರಾರಂಭವಾಗುವುದು ಇನ್ನೊ ಎರಡು ದಿನಗಳು ನಡೆಯುತ್ತದೆ. ಅದರಕ್ಕಿಂತ ಮುಂಚಿತವಾಗಿ ಬದುಕು ಕಮ್ಯೂನಿಟಿ ಸಂಸ್ಥೆಯಿಂದ ಯುವನಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೇವೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ತಿಳಿಸಿದರು. ಅಲ್ಲಿಯ ವರೆಗೆ ಎಲ್ಲಿ ಉಳಿದು ಕೊಳ್ಳಬೇಕು ಎಂಬ ಆತಂಕ ಕಾಡುತ್ತಿತು ಅಷ್ಟರಲ್ಲಿ ನನ್ನ ಆತ್ಮಿ ಗೆಳೆಯರು ಬೆಂಗಳೂರುನಲ್ಲಿ ಬಂದಿದ್ದರು. ಅವರನ್ನು ಭೇಟಿಯಾಗಿದೆ. ನಂತರ ಒಂದು ಲ್ಡಾಜ್ನಲ್ಲಿ ಒಂದು ರೂಂ ಬುಕ್ ಮಾಡಿ, ನಾನು ಮತ್ತು ಸ್ನೇಹಿತರ ಜೊತೆಯಲ್ಲಿ ಇದೆವು. ಬೆಂಗಳೂರುನಲ್ಲಿ ನನ್ನ ತಂದೆಯವರ ಸ್ನೇಹಿತರು ಸಹ ಬೆಂಗಳೂರುಗೆ ಆಗಮಿಸಿ ಅವರು ಲ್ಡಾಜ್ನಲ್ಲಿ ಉಳಿದುಕೊಂಡಿದರು. ನಮ್ಮ ತಂದೆ ಅವರ ಜೊತೆಯಲ್ಲಿ ಕೃಷ್ಣಾ ಲ್ಡಾಜ್ನಲ್ಲಿ ಉಳಿದುಕೊಂಡಿದರು.

ನಂತರ ಇನ್ನೊಂದು ದಿನ ಕಳೆಯಬೇಕ್ಕಾಗಿತ್ತು. ಅಷ್ಟರಲ್ಲಿ ತಂದೆ ಅವರು ಗುಲ್ಬಗರ್ಾಕ್ಕೆ ವಾಪಸ್ ಹೋಗಲು ಸಿದ್ದವಾದರು. ಅವರನ್ನು ಗುಲ್ಬಗರ್ಾಕ್ಕೆ ಕಳುಹಿಸಲು ಟ್ರೈನ್ ಟೀಕೆಟ್ ಬುಕ್ ಮಾಡಿ. ಅವರಿಗೆ ಮೇಜಸ್ಟಿಕ್ ರೈಲ್ವೆ ನಿಲ್ದಾಣದಿಂದ ಕಳುಹಿಸಲು ಹೋಗಿದೇವೆ ಅದೇ ಸಂದರ್ಭದಲ್ಲಿ ನನ್ನ ತಂದೆ ಮುಖದಲ್ಲಿ ಇನ್ನೋ ಮರೇತ್ತು ಹೋದಂತೆ ಅವರ ಮುಖದಲ್ಲಿ ನಿಚವ್ಚಲವಾಗಿ ಕಾನುತ್ತಿತು. ಅದೇ ರೀತಿಯಲ್ಲಿ ನನ್ನ ಮನಸ್ಸಿನಲ್ಲಿಯು ನಾನು ಏನೋ ನನ್ನನಿಂದ ದೂರವಾಗುತ್ತಿದೇಲ್ಲ ಎಂಬ ಆತಂಕ ಕಾಡುತ್ತಿತು. ಮನಸ್ಸಿಗೆ ಸಮಥಾನವಾಗುತ್ತಿರಲಿಲ್ಲ.ಇದೇ ಸಂದರ್ಭದಲ್ಲಿ ನಮ್ಮಿಬ್ಬರ ಜೊತೆಯಲ್ಲಿ ನನ್ನ ಆತ್ಮಿಯ ಸ್ನೇಹಿತ ಮುಜಾಹೀದ್ ಪಟೇಲ್ ಇರುವುದರಿಂದ ನಮ್ಮಿಬ್ಬರ ಆತಂಕ, ದುಃಖಗಳನ್ನು ಆಚ್ಚೇಗೆ ಅಟ್ಟಲು ಆಗಲಿಲ್ಲ.

                                >>>>ನಾಳೆ ಮುಂದುವರಿಯುತ್ತದೆ.>>>>

Comments