indian politics

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 65 ನೇ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ದೇಶವನ್ನು ಸ್ವಾತಂತ್ರ್ಯಗೊಳ್ಳಿಸುವಲ್ಲಿ, ಹಲವು ಮಂದಿ, ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಇಂತಹ ತ್ಯಾಗದ ಪ್ರತಿಫಲವಾಗಿ ನಾವಿಂದು ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಉಸಿರಾಡುತ್ತಿದ್ದೇವೆ.
 ಇದರ ಹಿಂದೆ ಒಂದು ಉದ್ದೇಶವಿತ್ತು, ಕಾರಣವು ಇತ್ತು.
ಅದು ಏನಂದರೆ, ಬ್ರಿಟೀಷರು ಭಾರತಿಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ಮತ್ತು ಅನ್ಯಾಯ  ಹಾಗೂ ಕೃರವಾಗಿ ನಡೆದು ಕೊಳ್ಳುತ್ತಿದರು.
ಈ ಉದ್ದೇಶದಿಂದ ನಮ್ಮ ದೇಶದ ಮಹಾನ ಹುತ್ತಾತ್ಮರಲ್ಲಿ ಬ್ರಿಟೀಷರ ವಿರೋಧ ಸಂಘಟನೆಗಳು ಹುಟ್ಟಿಕೊಂಡಿದವು. ಸಂಘಟನೆಗಳ ದೈರ್ಯದಿಂದ ಬ್ರಿಟೀಷರ ವಿರೋಧ ಒಗಟ್ಟಾಗಿ ನಿಲುತ್ತಿದವು. ಬ್ರಿಟೀಷರು ತಮ್ಮ ಅಪಾಯಂಟು ಮಾಡುವ ಸಂಘಟನೆಯಲ್ಲಿರುವ ಹೋರಾಟಗಾರನ್ನು ಬ್ರಿಟೀಷ ಆಡಳಿತ ಅವರನ್ನು ಬಂಧಿಸುತ್ತಿದ್ದರು. ಅಷ್ಟೇ ಅಲ್ಲದೆ ಹೋರಾಟಗಾರ ಮನೆಯ ಮೇಲೆಯೂ ಹಲ್ಲೆ ಹಾಗೂ ದೌರ್ಜನ್ಯ ಮಾಡುವುದು ನಡೆಸುತ್ತಿದರು.


ಅಂದಿನ ಯುವ ಪಿಳಿಗೆ ಇವು ಎಲ್ಲವನ್ನು ಗಮನಿಸಿ ಅವರ ರಕ್ತದಲ್ಲಿ ಅಹಿಂಸೆಯ ವಿರೋಧ ಹೋರಾಟ ಮಾಡುವ ಸಾಹಾಸ ಬೇಳೆಯುತ್ತಿತು. ಈ ರೀತಿಯ ಯುವ ಶಕ್ತಿ ಹೆಚ್ಚುತಲ್ಲೇ ಬಂತು. ಇದಕ್ಕಾಗಿ ಇಂದು ನಮ್ಮಗೆ ಸ್ವಾತಂತ್ರ್ಯದಕ್ಕಿತ್ತು. ಎಂಬುದಕ್ಕೆ ಅಂದಿನ ಯುವ ಪಿಳಿಗೆ ನಡೆಸಿರುವ ಹೋರಾಟಗಳು ಮತ್ತು ಬಲಿದ್ದಾನೆಗಳೆ ಸಾಕ್ಷಿ.

 ಆದರೆ ಇಂದಿನ ಆಡಳಿತ ವರ್ಗಾ  ಕೇಟ್ಟುಹೋಗುತ್ತಿದೆ. ನಮ್ಮನ್ನು ಹಾಗೂ ನಮ್ಮ ದೇಶವನ್ನು ಆಳುವಂತಹ ರಾಜಕಾರಣದಲ್ಲಿ  ಕ್ರಿಮೀನಲ್ಸ್ ಗಳು ತುಂಬಿಕೊಂಡಿವೇ. ಇನ್ನೋ ಕೆಲವು ಕ್ರಿಮಿನಲ್್ಗಳು ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ಇಂತಹ ಕ್ರಿಮೀನಲ್ ಗಳಿಗೆ ನಮ್ಮ ದೇಶದ ಆಡಳಿತದಲ್ಲಿ ಗೌರವದಿಂದ ಬರಮಾಡಿಕೊಳ್ಳುತ್ತಿದ್ದಾರೆ.ಸ್ವಾತಂತ್ರ್ಯದ ಮುಂಚಿನ ಕಾಲದಲಿ ಹೋರಾಟಗಾರರು ಗುಂಪ್ಪು ಸೇರೆ ಸಂಘಟನೆಗಳನ್ನು ಕಟ್ಟುತ್ತಿದ್ದರು. ಇಂದಿನ ರಾಜಕಾರಣದಲ್ಲಿ ಕ್ರಿಮೀನಲ್ಸ್ ಗಳು ತಮ್ಮ ಗುಂಪನ್ನು ಕಟ್ಟಲು ಸುಕ್ತ ಜಾಗವನ್ನು ರಾಜಕಾರಣ ಮಾಡಿಕುಡುತ್ತಿದೆ.

ನಮ್ಮ ಮುಂದಿನ ಜನ್್ರೇಷನ್ ಹೇಗಿರಬಹು ಇಂತಹ ರಾಜಕಾಣವನ್ನು ನೋಡಿ ನಮ್ಮ ಯುವ ಪಿಳಿಗೆ ದಾರಿ ತಪ್ಪುವುದಕ್ಕೆ ಅನುಮಾನವೇ ಇಲ್ಲ. ಯುವ ಪಿಳಿಗೆಯಲ್ಲಿ ಶ್ರಿಮಂತರಾಗಬೇಕು ಅಥವಾ ರಾಜಕಾರಣಿಯಾಗಿ ದೇಶದ ಜನತೆಯ ಸೇವೆ ಮಾಡಬೇಕು ಎಂದು ಕನಸು ಕಾಣುತ್ತಿರುತ್ತಾರೆ. ನಮ್ಮ ರಾಜಕಾರಣದಲ್ಲಿ ಕ್ರಿಮೀನಲ್ಲ್ ಇರುವುದರಿಂದ. ಯುವ ಶಕ್ತಿಯ ಕನಸುಗಳು ಬದಲಾಗಿ ಹೋಗುತ್ತವೆ. ಹಾಗೂ ದಾರಿ ತಪ್ಪುತವೇ.


Comments